ಎಪ್ಪತ್ತು

 

ಮುಟ್ಟಿ ಭಜಿಸುವ ಕನಸ ಕಂಡೆನೆ| 

ಪಟ್ಟಾಭಿರಾಮ ನಿನ್ನ ಪಾದ||ಪ||


ಮುಟ್ಟಿ ಭಜಿಪ ಕನಸ ಕಂಡೆನು|

ಸೃಷ್ಟಿಯೊಳಗಿರ್ಪ ಸಕಲರ ಅ|

ಭಿಷ್ಟ ಸಲಿಸಿ ಸಲಹುವ ಮಹಾ|

ವಿಷ್ಣು ಮೂರುತಿಯ ಶ್ರೀ ಪಾದ||ಅ.ಪ||


ಸೂಕ್ಷ್ಮವಾದ ರೂಪ ಕಂಡೆನೊ|

ಅಕ್ಷಿ ಅಂತರಂಗದ ಒಳಗಣ|

ವಕ್ಷ ಸ್ಥಳದಿ ಸತಿಯ ತೋರಿದ|

ಲಕ್ಷ್ಮೀ ಪತಿಯ ಪಾವನ ಪಾದ||ಮುಟ್ಟಿ||


ಲಕ್ಷ ಕೋಟಿ ರೂಪ ಕಂಡೆನೆ|

ಚಕ್ಷು ದ್ವಯದಿ ಸಾಕ್ಷಿಯಾಗಿ|

ಮೊಕ್ಷದಾಯಕನಾಗಿ ರಕ್ಷಿಪ|

ಪಕ್ಷಿವಾಹನ ಶ್ರೀ ಹರಿ ಪಾದ||ಮುಟ್ಟಿ||


ಸ್ಥಿತಿಕರ್ತನವನ ಕಂಡು ಸರಿ|

ಮಾತು ಹೊರಳದು ಉತ್ತಮಿಕೆಯಲಿ|

ಮತಿಯಿತ್ತು ಮಂಗಳವ ಮಾಡುವ|

ಮಾತರೀಶ ವಿಠ್ಠಲನ ಪಾದ||ಮುಟ್ಟಿ||



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅರುವತ್ತಾರು

ಅರವತ್ತೇಳು

ಎಪ್ಪತ್ತೊಂದು