ಅರವತ್ತೇಳು
ಎಲ್ಲರ ಮನೆಯೊಳಗಾಡು|
ಗೊಲ್ಲ ಗೋಪಾಲಕೃಷ್ಣ ||ಪ||
ಎಲ್ಲರ ಮನದಿ| ಸಲ್ಲಿಸಿ ಸಲಹುವ
ಬಲ್ಲಿದನಣ್ಣ | ಬಲರಾಮರ ಕೂಡಿ|| ಅ.ಪ||
ಮಕ್ಕಳೊಡಗೂಡಿ| ಅಕ್ಕರೆಯಿಂದಲಿ|
ಶ್ರೀಕೃಷ್ಣ ಹರಿ ನೀ| ನಕ್ಕು ನಲಿಯುತ|| ಎಲ್ಲರ ||
ಚಿಣ್ಣರೊಡನಾಡಿ| ಮಣ್ಣನೆ ಮೆತ್ತುತ|
ಬಣ್ಣದೋಕುಳಿಯ| ಪಣ್ಣನೆ ಹಾರಿಸಿ|| ಎಲ್ಲರ||
ಉಕ್ಕಿದ ಯಮುನೆಯ| ಸೊಕ್ಕಿನ ಉರಗನ|
ಮುಕ್ಕಿ ಬಿಸಾಡಿದ| ಚೊಕ್ಕ ವಿಠಲ ಹರಿ|| ಎಲ್ಲರ||
ಸತ್ವ ಗುಣಪೂರ್ಣ| ಸತ್ಫಲದಾಯಕ|
ಸತ್ಪುರುಷ ಸಿದ್ಧ| ಮಾತರೀಶ ಗುರು|| ಎಲ್ಲರ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ