ಇಪ್ಪತ್ತೊಂದು

 

ಅಸುವೆಂಬ ಸಾಧನ ಅಳಿಯುವ ಮೊದಲು

ವಾಸುದೇವನ ನಾಮ ಭಜಿಸೊ ಮರುಳೆ||ಪ||


ಏಸು ಜನ್ಮಂಗಳ ಕಳೆದು|

ಈ ಸುನರಜನ್ಮವ ಪಡೆದು|

ದೋಷರಾಶಿಯ ಮಾಡಿ ಬಲು|

ಘಾಸಿ ಪಡುವುದಕೆ ಮುನ್ನದಿ|

ಶ್ರೀಶ ಕೃಷ್ಣನ ನಾಮ ಭಜಿಸೊ ಮರುಳೆ||೧||


ಭೋಗ ಜೀವನವನು ನೆಚ್ಚಿ|

ರೋಗ ಸಾವಿರದಲಿ ಮುಚ್ಚಿ|

ರಾಗ ದ್ವೇಷಗಳದು ಚುಚ್ಚಿ|

ಜವರಾಯ ಹಿಡಿಯುವ ಮುನ್ನ|

ನಾಗಶಯನನ ನಾಮ ಭಜಿಸೊ ಮರುಳೆ||೨||


ಮಡದಿ ಮಕ್ಕಳ ಪಡೆಯುತಾ|

ದುಡಿದು ಜೀವವ ಸವೆಸುತಾ|

ಬಿಡದೆ ಕಷ್ಟವು ಭಾದಿಸುತ|

ಸುಡುಗಾಡು ಸೇರುವ ಮುನ್ನ|

ಒಡೆಯ ಮಾತರೀಶನ ಭಜಿಸೊ ಮರುಳೆ||೩||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು