ಅರವತ್ತೆಂಟು
ಕಾಯಲಾರೆ ಕಾಯಜಪಿತನೆ ನಿನ್ನ
ಮಾಯ ಸಾಯುಜ್ಯವು ಒದಗಲಿಯೆಂದು ||ಪ||
ಕಾಯವ ಕಳೆದು ತೀರುವೆನು
ಸಾಯುವ ಭಯವಿಲ್ಲವೆನಗೆ ||ಅ.ಪ||
ಹೊಟ್ಟೆಗಿಕ್ಕದೆ ನಿ ಮಟ್ಟ ಕೆಳಗಿರಿಸೆ
ಸಿಟ್ಟಗೊಂಡು ಬಲು ಕೆಟ್ಟುಹೋಗೆನೋ
ದಟ್ಟ ದುರಿತಗಳ ಕೊಟ್ಟರೂ ಕೂಡ
ಮುಟ್ಟಿ ಪಾದದಿಂಬಿಟ್ಟು ಬದುಕುವೆನೊ || ಕಾಯ ||
ದುರಿತಭವ ರಾಶಿ ವರವಾಗಿ ಕೊಡಲು
ಸಾರುವುದ ಬಿಡೆನು ಹರಿ ನಾಮಂಗಳ
ಸಿರಿ ಮಾತರೀಶ ಕರುಣದಲಿ ಕಾಯೊ
ಮರಣವೆಂಬಳುಕ ತೊರೆದಿರುವೆ ನಾನು|| ಕಾಯ ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ