ಎಂಟು
ಸಾಗರದಿಂ ತೆಗೆದ ಬಿಂದು ನೀರ ಹನಿಯಂತೆ|
ಜಗದ ಜೀವಂಗಳ ನಡುವೆ ಇಹೆನಯ್ಯ ನಾನು||ಪ||
ಭಯವೇತರವು ಇಲ್ಲಿ|
ಹಯವದನ ಇರಲಾಗಿ|
ಕಾಯಜ ಪಿತನ ಕರುಣೆ|
ಕಾಯುತಿರಲು ಜಯವೆನಗೆ ನಿಶ್ಚಯವು||ಸಾಗರದಿಂ||
ಯೋನಿ ಸಾವಿರ ದಾಟಿ|
ಮಾನವ ಜನ್ಮದೊಳಗೆ|
ಜ್ಞಾನಿಯೆನಿಸಿದೆಯೆನ್ನ|
ಅನುದಿನವು ಬೇಡುವೆನು ಪಾಲಿಸೆಂದು||ಸಾಗರದಿಂ||
ಗುಣಗಳೆಲ್ಲವ ಮರೆತು|
ಹಣದಾಸೆಯೊಳ್ ಬಿದ್ದು|
ಮಣ ಪಾಪದ ಭಾರದಿ|
ಕಾಣದಾಯಿತು ದಾರಿ ವೇಣುಲೋಲ||ಸಾಗರದಿಂ||
ಬಿಂದು ಬಿಂದು ಸೇರಿಸಿ|
ಒಂದುಗೂಡಿಸಿ ಇಂದು|
ಅಂದದಿ ಸಲಹುವಾತ|
ತಂದೆ ಮಾತರೀಶ ವಿಠಲನಲ್ಲವೆ||ಸಾಗರದಿಂ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ