ಇಪ್ಪತ್ತು
ನಗೆಯಾಡಲು ಬೇಡಿರಿ|
ಬಗೆಯೊಳಗೆನ್ನ ಕಂಡು|
ಅಗಹರ ಸಿರಿ ಮುಕುಂದ |
ಖಗವಾಹನನಾಣೆಯು|| ನಗೆಯಾಡಲು||
ತಿರುಕ ನಾನೂರ ತಿರುಗೀ|
ಮುರುಕು ಗುಡಿಯೊಳಗೆ ಹುದುಗೀ|
ಹರಕು ಬಟ್ಟೆಯೊಳು ಮಿರುಗೀ|
ನರಕ ಮೈಯೊಳಗೆ ಒದಗೀ|| ನಗೆಯಾಡಲು||
ಎಂಜಿಲು ಸುರಿವ ಬಾಯೊಳಗೇ|
ಗಂಜಿಯ ಸುರಿದು ಬಾಯೊಳಗೇ|
ನಂಜು ಕೀವು ಮೈಯೊಳೇರಿ|
ಮಂಜಾಗಿ ಮುಂದಿನ ದಾರಿ|| ನಗೆಯಾಡಲು||
ದೇಶಢಂಭವೆಲ್ಲ ತೊರೆದು|
ಈಶ ಮಾತರೀಶನೆ ಬಲು|
ಆಶೆಯಿಂದ ನಿನ್ನ ನೆನೆದು|
ದೋಷರಹಿತ ಎನ್ನ ಪೊರೆದು|| ನಗೆಯಾಡಲು||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ