ಇಪ್ಪತ್ತ ನಾಲ್ಕು

 

ಯೋಗವು ಬರಬೇಕು|ಯೋಗವು ಬರಬೇಕು||ಪ||

ಸಾಗರಶಯನನ ನಿರತದಿ ನೆನೆಯುವ ಸು|

ಯೋಗವು  ಬರಬೇಕು.||ಅ.ಪ||


ಅಗಹರ ಮುಕುಂದ|

ನಗಧರ ಮಾಧವ|

ಖಗ ವಾಹನ ಹರಿ|

ನಿಗಮ ಗೋಚರ ಅಗಣಿತ ಮಹಿಮನ| ನೆನೆಯುವ||ಯೋಗವು||


ಉಡುಗೆ ತೊಡುಗೆ ಬಲು|

ಮಡದಿಮಕ್ಕಳಿಗೆ|

ಕೊಡಲುಯಿಲ್ಲದೆಯೆ|

ಸುಡುಗಾಡ ಸೇರುವ ಮೊದಲು| ಬಡತನವೆಂಬೊ||ಯೋಗವು||


ಶಕ್ತಿಹೀನರಿಗೆ|

ಯುಕ್ತಿಯಿಂದಲಿ ಸ|

ಶಕ್ತ ಗುಣವಿತ್ತು ಅ|

ವ್ಯಕ್ತ ರಿಕ್ತದಿಂ ಪೊರೆವ|

ಭಕ್ತಿಯೆಂಬೊ||ಯೋಗವು||


ಮತವಿತ ರಹಿತಾ|

ಸತತ ಪೊರೆಯುವ|

ಅತುಳ ಬಲವಂತ|

ಮಾತರೀಶ ವಿಠಲನ ಪದದಾಸ್ಯದ||ಯೋಗವು||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು