ಮೂವತ್ತೆರಡು

ಜಾಗ ತೋರಿಸ ಬನ್ನಿ|

ಸಾಗರಶಯನನಿರದ||ಪ||

ಕಾಗಿನೆಲೆ ಕನಕನನು|

ಬೇಗ ಪೊರೆದವನಿರದ||ಅ.ಪ||


ಕೃಪಣ ಪುರಂಧರನ|

ತಪಕೆ ಒಲಿದು ಬಂದವ|

ಉಪಾಯದಿ ಅಜಮಿಳನ|

ಉಪಚರಿಸಿದವನಿರದ||ಜಾಗ||


ಕರಿಯ ಮಕರ ಎಳೆಯುತ|

ಇರಲು ಕರೆಯದೆ ಬಂದ|

ಪರಮಾತ್ಮ ಶ್ರೀ ಹರಿ|

ನಾರಾಯಣನು ಇರದ||ಜಾಗ||


ಕರುಣೆಯಿಂ ದ್ರೌಪದಿಗೆ|

ಸೀರೆ ಅಕ್ಷಯವಿತ್ತು|

ಪೊರೆದ ಸಿರಿ ಹರಿಯೆಂಬ|

ಕರುಣಾರೂಪನಿರದ||ಜಾಗ||


ಸುತನಾಡಿದುದ ಕೇಳಿ|

ಪಿತ ತಾ ಕಂಬವೊಡೆಯೆ|

ಅತುಳ ಅಸುರನ ತರಿದ|

ಮಾತರೀಶನು ಇರದ||ಜಾಗ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು