ಹದಿನಾಲ್ಕು
ನಮೋ ವಿಶ್ವೇಶತೀರ್ಥ ಗುರುರಾಜ|
ಕಾಮಾದಿ ವರ್ಜಿತ ದಿನಕರ ತೇಜ|
ಸಮಾಜಸುಧಾರಕ ಯತಿವರತಿಲಕ |
ಪಾಮರರೆಲ್ಲರ ಸಲಹೊ ಪುಂಗವನೆ|
ವಾಮನ ರೂಪ ಶತ ಸೋಮರ ತೇಜ|
ರಾಮಕುಂಜದಿ ಜನಿಸಿದ ಬಾಲಕನು|
ಸುಮಧ್ವ ಮತವ ಸಾರಿದ ಗುರುರಾಯ|
ಯಾಮಯಾಮಕೂ ನೆನೆದು ರಂಗನನು|
ರಾಮರಾಮ ಎಂದನಯೋದ್ಯೆಯೊಳು|
ರಮಾರಮಣನ ನೆನೆದನುಡುಪಿನೊಳು|
ಸುಮಾತರೀಶ ವಿಠಲನ ದಯೆಯಿಂದ|
ಅಮರ ಪದವಿ ಪಡೆದ ಘನ ಗುರುರಾಯ|
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ