ಒಂಬತ್ತು

 

ಬಿಸಿಲ ಬೇಗೆಗೆ ಮರದಡಿ ಆಸರೆಯಂತೆ

ವಾಸುದೇವನಾಸರೆ ಇಂದು ಎನಗಿಹುದು||ಪ||


ತಂದೆ ತಾಯಿಯು ಇರಲಿಲ್ಲ|

ಬಂಧು ಬಳಗವು ಬರಲಿಲ್ಲ|

ಮುಂದೆ ಬಂದೆನ್ನ ಸಲಹಿದ|

ಕಂದರ್ಪಜನಕನೊಬ್ಬನೆ ಗತಿಯೆಂಬೆ||ಬಿಸಿಲ||


ಮಿತ್ರಶತ್ರುಗಳಾರಿಲ್ಲ|

ಸತಿ ಸುತಾದಿಗಳಿರಲಿಲ್ಲ|

ಮತ್ತೆ ಸಹಪಾಠಿಗಳಿಲ್ಲ|

ಕತೃ ಸಿರಿ ಹರಿಯೊಬ್ಬನೇ ಗತಿಯೆಂಬೆ||ಬಿಸಿಲ||


ಸದ್ಯದಿ ಜೊತೆಯಾದರಿಲ್ಲ|

ವಿದ್ಯೆಯನು ಕೊಟ್ಟವರಿಲ್ಲ|

ವೈದ್ಯತ್ವ ಮಾಡಿದರಿಲ್ಲ|

ಮಧ್ವಗೊಲಿದ ರಂಗವಿಠಲ ಗತಿಯೆಂಬೆ||ಬಿಸಿಲ||


ಮಾತು ಕೊಟ್ಟವರಿಂದಿಲ್ಲ|

ಸೋತು ಹೋಗಲು ಯಾರಿಲ್ಲ|

ಆತುಕೊಂಡವ ಈ ಜಗದಿ|

ಮಾತರೀಶ ವಿಠಲನೊಬ್ಬ ಗತಿಯೆಂದೆ||ಬಿಸಿಲ||



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು