ಐದು

 

ಹರಿ ಮೆಚ್ಚುವ ಕೆಲಸ ಮಾಡಬೇಕು||ಪ||

ನರಜನ್ಮ ಪಡೆದ ಮೇಲೆ||

ಸಿರಿ ಮಾತರಿ ಪುರಕೆ  ಬರಲುಬೇಕು|

ಧಾರುಣಿಯೊಳಿದ್ದ ಮೇಲೆ||ಅ.ಪ||


ವೈಷ್ಣವತ್ವ ಸಾರಿದಾತ

ವಿಷ್ಣು ಪದವ ತೋರಿದಾತ

ಅಷ್ಟ ಮಠವ ಮಾಡಿದಾತ

ಕೃಷ್ಣ ಮೂರುತಿ ಒಲಿದ ಮಧ್ವಪತಿಯಂತೆ||ಹರಿ ಮೆಚ್ಚುವ||


ಸೋದೆ ಮಠವ ನೋಡಿದಾತ

ಮಧ್ವಮತವ ಸಾರಿದಾತ

ಆದರಿಸಿ ಭೂತರಾಜಗೆ

ಒದಗಿ ಬಂದಿಹ ವಾದಿರಾಜ ಮುನಿಯಂತೆ||ಹರಿ ಮೆಚ್ಚುವ||


ತುಂಗ ತಟದಲಿ ನಿಂತಾತ

ಮಂದ ಮತಿಗಳ ಪೊರೆದಾತ

ಚಂದ್ರ ರಾಮನ ಭಜಿಸುವತಿ 

ಯಂದದ ರಾಘವೇಂದ್ರಯತಿ ರಾಜನಂತೆ ||ಹರಿ ಮೆಚ್ಚುವ||


ದಾಸ ಕನಕ-ಪುರಂಧರರೊಳು

ಸಾಸಿರ ನಾಮ ಪಾಡಿಸುತ

ವಸುದೆಯೊಳಗೆ ಪೊರೆಯುತಿರುವ

ಈಶ ಮಾತರೀಶವಿಠಲನ ನೆನೆಯುತಲಿ||ಹರಿ ಮೆಚ್ಚುವ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು