ನಲವತ್ತೇಳು

 

ಪಾಡಿದರು ಮಂಗಳವ|ಕೂಡಿ ನಾರಿಯರೆಲ್ಲ||ಪ||

ಸಡಗರದಿ ಒಡೆಯ ಶ್ರೀಕೃಷ್ಣ ಸಲಹೆಂದು||ಅ.ಪ||


ಮಡುವಿನೊಳಿದ್ದ ಮಚ್ಚಕ ರೂಪನಿಗೆ|

ಪಿಡಿದು ಬೆಟ್ಟವ ಬೆನ್ನೊಳು ಪೊತ್ತವಗೆ|

ಪೊಡವಿಯ ದಾಡೆಯೊಳೆತ್ತಿ ಪಿಡಿದವಗೆ|

ಒಡೆದು ಕಂಬದಿ ಪ್ರಕಟವಾದವಗೆ||ಪಾಡಿದರು||


ಅಡಿಯ ರಕ್ಕಸನ ಶಿರದಿಯಿಟ್ಟವಗೆ|

ಕೊಡಲಿಯ ಪಿಡಿದು ನೃಪರ ಕಡಿದವಗೆ|

ಮಡಿಯನ್ನುಟ್ಟು ಕಾಡನು ಸೇರಿದಗೆ|

ಗಡಿಗೆಯನೊಡೆದು ಬೆಣ್ಣೆಯ ಕದ್ದವಗೆ|ಪಾಡಿದರು|


ಒಡನೆ ತ್ರಿಪುರಾಸುರರ ತರಿದವಗೆ|

ಕಡೆಯೊಳು ವಾಜೀಯ ತಾನೇರಿದಗೆ|

ಬಿಡದೆಹತ್ತವತಾರದೊಳು ಪೊರೆಯುವ|

ಒಡೆಯ ಸಿರಿ ಮಾತರೀಶ ವಿಠಲನಿಗೆ||ಪಾಡಿದರು||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು