ನಲವತ್ತ ನಾಲ್ಕು
ವೈದ್ಯತನವ ಕದ್ದು ನೋಡಿದೆ| ಭವರೋಗವೈದ್ಯನ|
ವೈದ್ಯತನವ ಕದ್ದು ನೋಡಿದೆ||ಪ||
ಸದ್ದಮಾಡದಲೆದ್ದು ಪೋಗಿ| ಮದ್ದನರೆದುದ್ದರಿಸುವಂಥ||ಅ.ಪ||
ಆರುಮಂದಿ ತಾ| ಸೇರಿ ಘಾತಿಸಲು|
ನೂರಾರು ರೋಗ| ಬರಿದೆ ಭಾದಿಸಲು|
ಮೂರುದೋಷಂಗ|ಳೆರಗಿತೆನಗೆಂದು|
ದಾರಿಯಗಾಣದೆ|ಚೋರನತೆರದಲಿ||ವೈದ್ಯತನವ||
ಮಲಮೂತ್ರಕೀವು|ಸುಲಭದಲೆ ಕೂಡಿ|
ಭಲೆಭಾದೆಯನು| ಸಲೆ ನೀಡುತಿರಲು|
ತಲೆಯದು ತಿರುಗುತ|ಬಲಹೀನನಾಗಿ|
ಶೂಲೆಯ ತಡೆಯದೆ|ಮೆಲ್ಲನೆಯೆದ್ದು||ವೈದ್ಯತನವ||
ಅತಿರೋಗಭಯದಿ|ಸೋತು ಪೋದೆನೈ|
ಮತಿಹೀನ ನನ್ನ| ಅತಿಚೋರತನಕೆ|
ಗತಿ ದಾಸತನದ|ಚಿತ್ತವಿತ್ತು ಪೊರೆ|
ಮಾತರೀಶಹರಿ|ವಿಠ್ಠಲರಾಯನೆ||ವೈದ್ಯತನವ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ