ಅರವತ್ತೊಂಬತ್ತು
ದಾರಿಯ ಕಾಯುತಿರುವ | ವರ ಪ್ರಹ್ಲಾದರಾಯ |
ನರಹರಿ ಬರುವನೆಂದು ||ಪ ||
ಬಿರಿದು ಕಂಬದೊಳಿಂದ | ನರಸಿಂಹ ತಾ ಬಂದ |
ತರಳನ ಪೊರೆಯಲೆಂದು || ಅ.ಪ ||
ಊರೆಲ್ಲ ತಿರುಗಾಡಿ | ಸುರರೊಡೆಯ ಶ್ರೀ ಹರಿಯ |
ಬಿರುದನು ಪಾಡಲೆಂದು |
ನಾರಾಯಣ ನಾಮವ | ನಿರತದಿಂದ ನುಡಿಯುವ |
ನಾರದ ಮುನಿಪ ಬಂದು || ದಾರಿಯ ||
ಅಗಣಿತ ಮಡುವಿನೊಳಗೆ | ಕೂಗುತಿರಲು ಕರಿರಾಜ |
ಬಗೆಯೊಳು ಬರಲುಯೆಂದು |
ಹಗೆಯಿಂದ ಕಾಲ್ಪಿಡಿದ | ನೆಗಳ ಕೊರಳನು ಹರಿದ |
ಬೇಗದಿ ಹರಿಯು ಬಂದು || ದಾರಿಯ ||
ಭಕ್ತಗಡಣ ಸೇರಿತು | ಯುಕ್ತರೀತಿಯಿಂದಲಿ |
ಭಕ್ತಿಯ ಮಾಡಲೆಂದು |
ಶಕ್ತದೈವರಗಂಡ | ಮಾತರೀಶ ವಿಠಲನು |
ಮುಕ್ತಿಯ ನೀಡಲೆಂದು || ದಾರಿಯ ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ