ಮೂವತ್ತೇಳು

 

ಅಕ್ಷರವ ದಯಪಾಲಿಸೆ ಶಾರದಾದೇವಿ|

ಅಕ್ಷರವ ದಯಪಾಲಿಸೆ||ಪ||


ಅಕ್ಷರವ ನೀಡಿದರೆ|

ಮೋಕ್ಷವ ಕೊಡುವಂಥ|

ಪಕ್ಷಿವಾಹನ ಹರಿಯ|

ತಕ್ಷಣದಿ ನೆನೆಯುವೆನು||ಅ.ಪ||


ಬಾಲ ರೂಪದಿ ಬಂದು|

ಲೀಲೆ ಸಾವಿರ ತೋರಿ|

ಹಾಲು ಮೊಸರನು ಮೆದ್ದ|

ಖಳನ ಕೃಷ್ಣಾ ಎನುಲು ||ಅಕ್ಷರವ||


ದಶರಥನ ಸುತನಾಗಿ|

ದಶಶಿರನ ತಾ ಕೊಂದು|

ಶಶಿಮುಖಿಯ ಕರೆತಂದ|

ದಶಹರ ರಾಮನೆನಲು||ಅಕ್ಷರವ||


ಸಾಗರವ ದಾಟಿ ಶರ|

ವೇಗದಿ ಲಂಕೆಗೈದು|

ಜಗದ ತ್ರಾಣನೆನಿಸಿದ|

ಯೋಗಿಯ ಹನುಮನೆನಲು||ಅಕ್ಷರವ||


ಭರದಿ ಬಕನನು ಕೊಂದ|

ಧುರದಲಿ ಕೌರವರನು|

ತರಿದವ ಪರಮವೀರ|

ಶೂರಗೆ ಭೀಮನೆನಲು||ಅಕ್ಷರವ||


ವಾಯುರೂಪದಿ ಬಂದು|

ಮಾಯವಾದವ ಗೆಲಿದು|

ಕಾಯ್ದ ಮಧ್ವ ರಾಯಂಗೆ|

ಜಯಜಯ ಜಯತುಯೆನಲು||ಅಕ್ಷರವ||


ಮಾತುಮಾತಿಗೆ ಸಿಕ್ಕು|

ಸೋತು ಪೋಗುವ ಮುನ್ನ|

ಮಾತರೀಶ ವಿಠಲನ|

ಸತತದಿಂದಲಿ ನೆನೆವ||ಅಕ್ಷರವ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು