ಹದಿನೇಳು

 

ಕರೆದಾಗ ಬರಬಾರದೇ

ಸುರಮುನಿ ಪೂಜಿತ ನಾರದ ವಂದ್ಯ||ಪ||

ಕರೆದಾಗ ಬಂದಕ್ಕರೆಯಲಿ

ಕರಿರಾಜನ ಪೊರೆದ ಶ್ರೀಹರಿಯೇ||ಅ.ಪ||


ತರುಣಿ ಮೊರೆಯಿಡಲು ಭರದಲಿ

ಹರಸಿ ನಾರಿಗೆ ಅಕ್ಷಯದ

ಸೀರೆಯನ್ನಿತ್ತ ಕರುಣಾಕರನೆ||ಕರೆದಾಗ||


ತರಳ ಧ್ರುವರಾಯ ಕರೆಯೆ

ಕರುಳ ಬೆರಳಿನೊಳು ಬಗೆದತಿ

ದುರುಳ ದೈತ್ಯನ ತರಿದ ನರಹರಿಯೆ||ಕರೆದಾಗ||


ಬಲಿ ಸುಗ್ರೀವ ವಿಭೀಷಣರ

ಸಲುಗೆಯಿಂದಲಿ ಬಳಿಬಂದು

ಒಲಿದು ಬಲು ಮೆರೆಸಿ ಪಾಲಿಸಿದ ಹರಿ||ಕರೆದಾಗ||


ಹರಿವಾಯು ರೂಪದಿ ಮಧ್ವ

ಗುರುರಾಯರ ಕರುಣೆಯಿಂದ

ಪೊರೆದವ ಮಾತರೀಶ ವಿಠಲ ಹರಿ||ಕರೆದಾಗ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು