ಅರುವತ್ತು
ಕಪ್ಪ ಕಾಣಿಕೆ ಕೊಡ ಬೇಕು|ಜಗ|
ದಪ್ಪ ಶ್ರೀರಂಗ ದೊರೆಗೆ||ಪ||
ಒಪ್ಪಿಕೊಂಡು ನಿನ್ನ ಚರಣ-|
ವಪ್ಪಿಕೊಂಡಿರುವೆ ನಿತ್ಯದ|
ತಪ್ಪು ಸಾಸಿರಗಳನೆಲ್ಲ|
ತಪ್ಪಿಸಿ ಸಲಹುತಿಹ ಜೀಯಗೆ||ಕಪ್ಪ||
ರಾಜಸಭೆಯ ನಡೆಸಿ ಜಗದ|
ವ್ಯಾಜ್ಯ ದೂರುಗಳನ್ನೆಲ್ಲ|
ರಾಜಿ ಮಾಡಿ ಕೊಡುವೆನೆನುತ|
ಸಜ್ಜನರಗ ಕಳೆಯುತಿರುವಗೆ||ಕಪ್ಪ||
ಬಗ್ಗಿಕೊಂಡಿರುವೆನೋ ನಾನು|
ಅಗಣಿತಗುಣ ನಿನ್ನ ಚರಣ-|
ಕೊಗ್ಗಿ ಕೊಂಡಿರುವೆನಗತಿ|
ವೆಗ್ಗಳ ಸಂಪದವ ಕೊಡುವಗೆ||ಕಪ್ಪ||
ನಿತ್ಯ ಸೇವೆ ಮಾಳ್ಪಗಿತ್ತ|
ಮಾತನುಳಿಸಿ ಕೊಡುವೆನೆಂದು|
ಉತ್ತಮ ವಾಜಿಯನೇರಿದ|
ಮಾತರೀಶ ವಿಠಲ ರಾಯಗೆ||ಕಪ್ಪ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ