ಐವತ್ತ ಐದು

 

ಎನ್ನೊಳಗಿನ ತ್ರಾಣ ನಿನ್ನದೋ |

ಅಂಜನಾಸುತ  ಮುಖ್ಯಪ್ರಾಣ ||ಪ||

ಭಿನ್ನಮಾಡದಲೆನ್ನ ಕಾಯೋ |

ಮುನ್ನದಿ ಬಂದು ಭವಭಯಹರಣ||ಅ.ಪ||

 

ಚಂದ್ರಮನ ಸಂತೋಷದಲಿ ಕಂ- |

ಡಂಬರಕೆ ಹಾರುತ ನಿಂದವನ |

ತಿಂಬೆನೆಂದು ಹರುಷದಿಂ  ಪಡೆದ- |

ನಂತ ವರಂಗಳ  ಹನುಮಂತಾ || ಎನ್ನೊಳ ||

 

ಲಂಘಿಸಿ ಲಂಕಾಪುರವ ಸುಟ್ಟೆ |

ಭುಂಜಿಸುತಾ ವನದ ಫಲಂಗಳ|

ಅಂಜದೆ ಸಂಜೀವನವ ತಂದು |

ಕಂಜನಾಭನ ಚರಣಕೆರಗುತ || ಎನ್ನೊಳ ||


ಸುಂದರ ಮೂರುತಿ ಹನುಮಂತನ|

ಸಂದೇಹವಿಲ್ಲದೆ ಸೇವಿಪರ|

ಕುಂದಿಲ್ಲದಲೆ ಕಾಯ್ವನೊ ನಮ್ಮ|

ಇಂದಿರೇಶ ಸಿರಿ ಮಾತರೀಶ || ಎನ್ನೊಳ ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು