ನಲವತ್ತ ಐದು

 

ದಾರವ ಧರಿಸಿಕೊಳಬೇಕು|

ಸರಸಿಯೊಳನುಮಾನವಿರದೆ ಜನಿ-|

ವಾರವ ಧರಿಸಿಕೊಳಬೇಕು||ಪ||


ವರ ಜನಿವಾರವೆಂಬುವುದು|

ಬರಿ ಮೂರೆಳೆ ದಾರವದಲ್ಲ|

ಪರಿ ತಿಳಿದು ಧರಿಸಿಕೊಂಬರ|

ಪರಮಪದಕೆ ಕರೆದೊಯ್ಯುವ||ದಾರವ||


ಕುರುಹು ಜಾತಿಯದಲ್ಲ ಇದ|

ನರಿತುಕೊಂಡವ ತಾ ಬಲ್ಲ|

ಬರವಣಿಗೆಯೆಂಬುದ ಕೊಟ್ಟು|

ಪರತತ್ವಕೆ ಕರೆದೊಯ್ಯುವ||ದಾರವ||


ಮೇಲು ಕೀಳೆಂಬುವುದಿಲ್ಲ|

ತುಲನೆ ಮಾಡಲು ತಾ ಬಲ್ಲ|

ಮೂಲವೇನೆಂಬುದ ತಿಳಿದು|

ಕಲಿಪಾಶವ ದೂರವಿಡುವ||ದಾರವ||


ಬೆರಳೊಳು ದಾರವನು ಪಿಡಿದು|

ಪರಮಾತ್ಮ ನಿನ್ನನು ನೆನೆದು|

ವರ ಮಾತರೀಶ ವಿಠಲನೆ|

ಸರಿದಾರಿಯ ತೋರೆನುತಾ||ದಾರವ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು