ಹದಿನೆಂಟು
ನಾಚುವುದೇತಕೆ ಮನವೇ|
ಸಚ್ಚಿದಾನಂದನ ನೆನೆಯಲು||ಪ||
ಉಚ್ಚ ನಾಮವಿದು ಜಗದೊಳು|
ತುಚ್ಚತನವನ್ನು ನೀಗುವ ಮೆಚ್ಚಿನಕ್ಷರವು.||ಅ.ಪ||
ಹೇಸು ಜೀವವ ನಾನೆಚ್ಚಿ|
ಘಾಸಿಗೊಂಡೆನೊ ಈ ಭವದಿ|
ವಸುಧೆಯೊಳಗಿನ ರೋಗವನು|
ವಾಸಿ ಮಾಡಿ ಸಲಹುವ ಸಿರಿ ಸಾಸಿರ ನಾಮ.||ನಾಚು ||
ಮಲ ಮೂತ್ರ ಕ್ರಿಮಿ ಕೀವು|
ಹೊಲಸುದುಂಬಿದ ಈ ಜೀವ|
ಬಲಿದು ಚರ್ಮ ಹೊಲಿದ ಹೊರೆಯು|
ಒಲಿದು ಸಲಹುವ ಬಲುಬಲದ ಸುಲಭದಕ್ಷರವು.||ನಾಚು ||
ಅತಿ ಕಾಮ ಮೋಹದಿಂ ಸಿರಿ|
ಮಾತರೀಶ ವಿಠಲನೆನ್ನದೆ|
ಘಾತುಕತನದಿ ಮಾಡಿ ತಪ್ಪಿ|
ಸೋತು ಹೋದನ ಪಿಡಿದೆತ್ತಿ ಸಲಹಿದ ನಾಮ.||ನಾಚು ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ