ಐವತ್ತೊಂದು

 

ಆಡಲು ಪೋಗೊ ರಂಗ|

ಕುಡಿತೆ ಹಾಲನುಗುಡಿದು||ಪ||

ಒಡಲು ಹಸಿವುದು ನಿನಗೆ|

ಬೇಡವೆನ್ನಲು ಬೇಡ||ಅ.ಪ||


ಎಂಟನೆ ಕುವರ ಬಾರೊ|

ತುಂಟ ಚೋರನೆ ಬಾರೊ|

ಕಂಠವೊಣಗಿತು ನಿನಗೆ|

ಕುಂಟು ನೆಪವನು ಬಿಟ್ಟು||ಆಡಲು||


ದೃಷ್ಟಿ ಬೊಟ್ಟನುಯಿಡುವೆ|

ಸೃಷ್ಟಿಗೊಡೆಯನೆ ಬಾರೊ|

ಮುಷ್ಟಿ ಮಣ್ಣಿಯ ತಿಂದು|

ತುಷ್ಟಿಯಿಂದಲಿ ಬೇಗ||ಆಡಲು||


ಜಗಳವಾಡಲು ಬೇಡ|

ಖಗವನೇರಲು ಬೇಡ|

ಮುಗುಳುನಗುತಲಿ ಬಂದು|

ಅಗುಳನ್ನ ನೀಯುಂಡು||ಆಡಲು||


ಮಾತ ಕೇಳೆಲೊ ನೀನು|

ಸೋತು ಪೋದೆನೊ ನಾನು|

ಮಾತರೀಶ ವಿಠಲನೆ|

ಎತ್ತಿ ಕೊಳ್ಳುವೆ ಬಾರೊ||ಆಡಲು||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು