ಎರಡು
ಕಡೆಗಾಲಕೊಡನಾಡಿಗಳಿಲ್ಲ ಹರಿ ವಾಸುದೇವ||ಪ||
ಬಿಡದೆ ಸಲಹುವ ಒಡೆಯ ನಿನ್ನ ನಾಮವೊಂದಲ್ಲದೆ||ಅ.ಪ||
ಹಡೆದಾಗ ಜನಸೇರಿ
ಸಡಗರ ಮನೆ ತುಂಬಾ
ಗಡಿಬಿಡಿಯೊಳು ಬಂದು
ಬಿಡದೆಯೆತ್ತಿ ಕೊಂಡರಲ್ಲದೆ.||ಕಡೆಗಾಲ||
ಅಂಬೆಗಾಲಿಕ್ಕೆ ಮನ
ದುಂಬಿ ಪಾಡುವರಯ್ಯ
ದಿಂಬು ತೊಟ್ಟಿಲ ತೂಗಿ
ಚಂದಿರನ ತೋರುವರಲ್ಲದೆ||ಕಡೆಗಾಲ||
ನಡೆದಾಡಿ ಬಂದಾಗ
ಪಿಡಿದೆತ್ತಿ ಮುದ್ದಾಡಿ
ಉಡಿಸಿ ಮೃದು ವಸನವ
ಹಿಡಿದು ಕರ ನಡೆಸಿದರಲ್ಲದೆ||ಕಡೆಗಾಲ||
ಜಪವ ಕಲಿಸಲುಯೆಂದು
ಉಪವೀತ ಹಾಕಿದರು
ವಿಪರೀತ ಸಖರೆಲ್ಲ
ಉಪಟಳವತಿ ಕೊಡುವರಲ್ಲದೆ||ಕಡೆಗಾಲ||
ನಡು ಹರೆಯ ಬರುವಾಗ
ಮಡದಿ ಮಕ್ಕಳ ಚಿಂತೆ
ಎಡೆಬಿಡದೆ ದುಡಿ ದುಡಿದು
ಒಡವೆ ವಸನ ಕೊಳುವರಲ್ಲದೆ||ಕಡೆಗಾಲ||
ಒಡಹುಟ್ಟಿದವರೆಲ್ಲ
ಬಡಿದಾಡಿಕೊಳ್ಳುತಲಿ
ಒಡನಿದ್ದ ಬಂಧುಗಳು
ಬಡಪಾಯಿ ಮಾಡಿದರಲ್ಲದೆ||ಕಡೆಗಾಲ||
ಮೋಡ ಮುಸುಕಿನ ಹಾಗೆ
ಕಡೆಗಾಲ ಬಂದಾಗ
ಕೊಡುವಾತ ಮುಕ್ತಿಯನು
ಒಡೆಯ ಮಾತರೀಶನಲ್ಲದೆ.||ಕಡೆಗಾಲ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ