ಇಪ್ಪತ್ತೆಂಟು

 

ಅರಿವಿನೊಳಗಿರುವ ದೈವ|

ಬರವಿನೊಳು ಬರಬಾರದೆ||ಪ||

ಶಾರದಾ ದೇವಿ ನಿನಗೆ|

ಕರುಣೆಯು ಎನ್ನೊಳಿಲ್ಲವೆ||ಅ.ಪ||


ಕರವ‌ಮುಗಿಯುವೆನು ನಿನಗೆ|

ಶಿರ ಬಾಗಿ ಚರಣಗಳಿಗೆ|

ಮರೆವು ನೀಗಿ ಜ್ಞಾನವನು|

ಎರೆಯಬೇಕು ಮನದೊಳಗೆ||ಅರಿವಿನೊಳಗೆ||


ಪಾಮರರ ಬಾಯಿಯೊಳಗೆ|

ನಾಮ ಸಾವಿರವ ನುಡಿಸಿ|

ಕಾಮ ಮೋಹಗಳ ಬಿಡಿಸಿ|

ಯಾಮ ಯಾಮದೊಳಗೆನ್ನ||ಅರಿವಿನೊಳಗೆ||


ಘೋರ ಪಾಪಗಳ ಮಾಡಿ|

ನರಕ ತಾಪದಲಿ ಬಾಡಿ|

ಉರಿದು ಕೆಡುವುದಕೆ ಮೊದಲು|

ಸಿರಿ ಮಾತರೀಶ ವಿಠಲ||ಅರಿವಿನೊಳಗೆ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು