ಮೂವತ್ತಾರು
ಅಳಿದು ಹೋಗುವ ಜನ್ಮ|
ಉಳಿಸಿಕೊಂಡವರುಂಟೆ ಜಗದಿ||ಪ||
ಕಳವಳವ ಪಡದೆ ಶ್ರೀ-|
ನಳಿನನಾಭನನು ನೆನೆ ಮನವೆ||ಅ.ಪ||
ಅನಂತ ಜನುಮ ದಾಟಿ|
ಮಾನವ ಜನುಮ ಪಡೆದು|
ಹೀನಗುಣ ತೊರೆದು ಬಲು|
ಮಾನವಂತನ ಭಜಿಸೊ ಮನವೆ||ಅಳಿದು||
ಕೀವು ತುಂಬಿದ ದೇಹ|
ನವಗಂಧವ ಪೂಸಲು|
ಭವ ಭಂಗವು ಹಿಂಗದೊ|
ಸಾವು ಕಟ್ಟಿಹ ಬುತ್ತಿ ಮನವೆ||ಅಳಿದು||
ಒಡೆತನ ಮನೆಯ ಕುಟ್ಟಿ|
ಬಡತನ ತಾ ಬರುವುದು|
ಸಡಗರದಿ ಇರಲಿಕ್ಕೆ|
ಸುಡುಗಾಡು ಕಾಣುವುದು ಮನವೆ||ಅಳಿದು||
ಸತಿಸುತರ ಮೋಹದಿ|
ಅತಿ ಭಂಗ ಪಡುತಿರಲು|
ಗತಿಯದೋರುವ ನಮ್ಮ|
ಮಾತರೀಶ ವಿಠಲನು ಮನವೆ||ಅಳಿದು||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ