ಐವತ್ತ ಮೂರು
ಕರಮುಗಿದು ಬಿನ್ನಪವು|
ಪರಶುರಾಮ ಮುನಿಪನ ಚರಣದೊಳು|
ಶರಣೆಂಬೆನೊ ಭವ ಋಣ|
ಭಾರ ಕಳೆ ಹರಿ ಋಷಿವೇಷಧರನೆ||ಪ||
ಜಮದಗ್ನಿ ರೇಣುಕೆಯ ಮಗನಾಗಿ|
ರಾಮ ಭಾರ್ಗವನೆನಿಸಿ ಮೆರೆದೆಯೊ|
ಸೋಮ ಸಹಸ್ರ ಕ್ಷಾತ್ರ ತೇಜದಿ|
ವಾಮ ಮಾರ್ಗದರಸರನು ತರಿದು|
ಭೂಮಿಯತಿ ಭಾರವ ಕಳೆದವಗೆ||ಕರ||
ಮಂಡೆ ಮೇಲಿನ ಉಂಡೆಜಡೆ ಹರಡಿ
ಕೆಂಡಗಣ್ಣಿನ ನೋಟವ ಬೀರುತ
ದಂಡ ಪರಶು ಚಾಪ ಪಾಣಿಯಾಗಿ
ಭಂಡ ನೃಪರನು ತುಂಡು ಮಾಡುತ
ಗಂಡುಗಲಿ ರೂಪ ತೋರಿದವನಿಗೆ||ಕರ||
ಪಿತನ ವಾಕ್ಯವ ನಡೆಸಲುಯೆಂದು|
ಮಾತೆ ಶಿರವನು ಕೊಡಲಿಯಲಿ ಕಡಿದ|
ಸುತನ ಮೆಚ್ಚಿ ಪಿತ ವರವೀಯಲಿಕೆ|
ಮತ್ತೆ ಮಾತೆಯನು ವರದೊಳು ಪಡೆದ|
ಮಾತರೀಶ ವಿಠಲನ ಪ್ರಿಯನೊಳು||ಕರ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ