ಅರುವತ್ತ ನಾಲ್ಕು

 

ಅಂತರಂಗದಿ ಅವಿತಿರುವ|

ಸಂತ ನೀನೆದ್ದು ಬಾರಯ್ಯ||ಪ||


ಚಿಂತೆಯೆಂಬುದ ನೀಗಿ|

ಕಂತು ಪಿತನ ತೋರಯ್ಯ||ಅ.ಪ||


ಮಲಿನವಾಗಿಹ ಮೈಯ|

ಜಲದೊಳು ತೊಳೆದರೆ ಸಲೆ|

ಕೊಳೆತು ನಾರೊದಲ್ಲದೆ|

ಮಲವೆಂಬುದಿಂಗದು|| 1 ||


ಒಳಮನವ ಭಕ್ತಿಯಲಿ|

ತೊಳೆದು ಮಜ್ಜನ ಮಾಡಿ|

ಹೊಳೆವ ಪಾದ ನೆನೆಯಲು|

ಕಳೆಯವುದು ಪಾಪಗಳು|| 2 ||


ಅನುದಿನದಿ ನೀಯೆನ್ನ|

ಮನಮಂದಿರದಿ ನೆಲೆಸಿ|

ತನುವ ನೇಗಿಲು ಮಾಡಿ|

ಮನಸಜ ಪಿತನ ತೋರು|| 3 ||


ಉತ್ತಿ ಹದವನು ಮಾಡಿ|

ಬಿತ್ತು ಭಕ್ತಿಯ ಬೀಜ|

ಮಾತರೀಶ ವಿಠಲನ|

ಸತ್ಯ ದರ್ಶನ ಮಾಡೊ|| 4 ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅರುವತ್ತಾರು

ಅರವತ್ತೇಳು

ಎಪ್ಪತ್ತೊಂದು