ಮೂವತ್ತೆಂಟು

 

ಅಂದಿಗೆ ಅದು ಸುಖವು,|

ಇಂದಿಗೆ ಇದು ಸುಖವು||

ಎಂದೆಂದಿಗೂ ಹರಿಪಾದ ಭಜನೆ ಸುಖವು||


ಅಂದಿಗೆ ಸುಖವಾಯ್ತು,|

ಚಂದದ ಜಯವಿಜಯರ್ಗೆ|

ಮುಂದೆ ರಕ್ಕಸ ಜನ್ಮ, |

ಅಂದವಾಯ್ತದರಿಂದ||ಅಂದಿಗೆ||


ಅರಮನೆ ಅಂದವಾಯ್ತು, |

ವರ ವಿಭಿಷಣಗಂದಿಗೆ|

ಶ್ರೀರಾಮಚಂದ್ರಮನ, |

ಚರಣ ಒಲಿಯಿತಿಂದಿಗೆ||ಅಂದಿಗೆ||


ಸತ್ಯವಾದಿಗಂದಿಗೆ|

ಇತ್ತೆ ರಾಜ ಸುಯೋಗ|

ಮತ್ತೆ ಮಸಣ ಕಾಯಿಸಿ|

ಒತ್ತೆಯಿರಿಸಿದರಿಂದ||ಅಂದಿಗೆ||


ಪುಟ್ಟಿಸಿದ ಮೇಲೆ ತಾ|

ಗಟ್ಟಿಯಲಿ ರಕ್ಷಿಪನು|

ಚಿತ್ತದೊಲ್ಲಭ ನಮ್ಮ|

ಮಾತರೀಶ ವಿಠ್ಠಲ||ಅಂದಿಗೆ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು