ಇಪ್ಪತ್ತೇಳು

 

ವಿದ್ಯೆಯ ಪಡೆಯಬೇಕು|

ಸಾಧು ಸಜ್ಜನರೆಲ್ಲ|

ಕ್ರೋಧ ಮದ ಮತ್ಸರವ|

ಒದ್ದು ಓಡಿಸುವಂಥ||ವಿದ್ಯೆಯ||


ಉದರ ಪೋಷಣೆ ಮಾಡಿ|

ಮಧುರ ಜೀವನವೆನುತ|

ಸಾಧನವ ಮರೆಯುತಲಿ|

ಮಾಧವನ ನೆನೆವಂಥ||ವಿದ್ಯೆಯ||


ಮಡದಿ ಮಕ್ಕಳ ಮೆರೆಸಿ|

ನಡೆಯುತ ಭವದೊಳಲೆದು|

ಕಡೆಗಾಲಕೆ ಮುಕ್ತಿಯ|

ಪಡೆಯಲು ಒದಗುವಂಥ||ವಿದ್ಯೆಯ||


ಕಷ್ಟ ಪಡದೆಲೆ ದುಡಿದು|

ನಷ್ಟ ಪಡುತಲಿ ಹಿರಿದು|

ಅಷ್ಟು ದುಡಿಮೆಯ ಕಳೆದು|

ಕೃಷ್ಣ ಮೂರ್ತಿಯ ನೆನೆವ||ವಿದ್ಯೆಯ||


ಹಾದರಕೆ ಹಾತೊರೆದು|

ಮೋದದಿಂ ಬಲು ಮೆರೆದು|

ವೇದನೆ ಪಡುವ ಮೊದಲು|

ಮಾಧವನ ನೆನೆವಂಥ||ವಿದ್ಯೆಯ||


ಮಾತುಮಾತಿಗೆ ತಪ್ಪಿ|

ಸತತ ಪಾಶಕೆ ಸಿಲುಕಿ|

ಸೋತು ಹೋಗುವ ಮುನ್ನ|

ಮಾತರೀಶನ ನೆನೆವ||ವಿದ್ಯೆಯ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು