ಅರುವತ್ತ ಮೂರು

 

ರಂಗಪೂಜೆಯ ನೋಡಿರೊ||ಪ||

ಮಂಗಳಾಂಗ ಜಗದೊಡೆಯ|

ಪಾಂಡುರಂಗ ಶ್ರೀ ಹರಿಯ||ಅ.ಪ||


ದಂಡೆಯನ್ನವನ್ನಿಟ್ಟು|

ಉಂಡೆಯಪ್ಪವ ಬಿಡಿಸಿ|

ತಾಂಬೂಲ ಕ್ರಮುಕದಿ|

ಸಿಂಗರಿಸಿ ಮಾಡುವ||ರಂಗ||


ಬಾಳೆ ನಾರಲಿ ನೆಯ್ದ|

ಎಳೆ ಹಿಂಗಾರ ಹೂವ|

ಬಲು ಅಂದದಿ ಜೋಡಿಸಿ|

ಸಾಲುದೀಪ ಹಚ್ಚುತ||ರಂಗ||


ಮಂಗಳಾಂಗಿಯರೆಲ್ಲ-|

ನಂಗಜನಕ ರಂಗನ|

ಹಿಂಗದೆ ಪಾಡುತ ಹರಿ|

ಮಂಗಳವ ಮಾಡೆಂದು||ರಂಗ||


ಅತಿಶಯದಿ ಪೂಜಿಪರ|

ಸತತ ಪೊರೆಯುವೆನೆಂದು|

ಮಾತಗುಡುತಿರುವ ಸಿರಿ|

ಮಾತರೀಶ ವಿಠಲನ||ರಂಗ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅರುವತ್ತಾರು

ಅರವತ್ತೇಳು

ಎಪ್ಪತ್ತೊಂದು