ಅರುವತ್ತಾರು

 

ನೀರ ತರಲು ಪೋಗೋಣ ಬಾರೆ| 

ತ್ವರದಲಿ ಒದಗು ನೀರಜ ನಯನೆ||ಪ||

ಪೋರನು ಎದ್ದರೆ ದಾರಿಯು ತೋಚದು|

ಕರಕರೆ ಮಾಡುವ ರಚ್ಚೆಯ ಹಿಡಿಯುತ||ಅ.ಪ||


ಅಟ್ಟಾಡಿ ಆವಿ|ನೊಟ್ಟಿಗೆ ಪೋಗುವ|

ಪಟ್ಟನು ಬಿಡದಲೆ|ಚಿಟ್ಟೆಯ ಹಿಡಿಯುವ|

ಮುಟ್ಟಿ ಫಣಿಹೆಡೆಗೆ| ಕುಟ್ಟುತ ಕುಣಿಯುವ|

ಅಟ್ಟುತ ಅಣ್ಣಗೆ| ಪೆಟ್ಟನು ಕೊಡುವನೆ||ನೀರ||


ಸದ್ದನು ಮಾಡದೆ|ಹದ್ದನು ಏರುವ|

ಬುದ್ದಿಯು ಇಲ್ಲದೆ|ಕದ್ದನೆ ಬೆಣ್ಣೆಯ|

ಬಿದ್ದು ತಾನೆದ್ದು|ಗುದ್ದುವ ಮಲ್ಲರ|

ಎದ್ದರೆ ಅಳುವನಿ|ಮುದ್ದು ಶ್ರೀಕೃಷ್ಣ||ನೀರ||


ನಾರಿಯರೆಲ್ಲರ|ಸೀರೆಯ ಕದಿಯುವ|

ಚೋರನವನು ನರ|ಹರಿ ನಾರಾಯಣ|

ಸಿರಿ ಮಾತರೀಶ|ವರ ವಿಠಲರಾಯ|

ನಿರತದಿಂದ ಭಕು|ತರ ಪೊರೆಯುತಿರುವ||ನೀರ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅರವತ್ತೇಳು

ಎಪ್ಪತ್ತೊಂದು