ಐವತ್ತೆರಡು
ಹರಿ ನಾಮವೆಂಬೊ ತರಂಗಿಣಿ |
ಹರಿಯುತಲಿಹುದು|
ಗುರು ಮಧ್ವ ವರ್ಷ ಧಾರೆಯಿಂದ||ಪ||
ದುರಿತ ಭವತಾಪ ರಾಶಿ ಕೊಚ್ಚಿ|
ನಾರಾಯಣ ನಾಮ ವಾರಿಧಿಯ ಸೇರುತಿಹುದು||ಅ.ಪ||
ಹರಿನಾಮದೊರತೆ| ನೀರ ಹಾಯಿಸುತ|
ಪರಮಪದವಿಯನು| ಸೇರುವುದಕೆಂದು||ಹರಿ||
ಹುಟ್ಟೆಂಬ ನೌಕೆಗೆ| ಇಟ್ಟು ಪಟಹಾಯಿ|
ಹುಟ್ಟು ಹಾಕಿ ದಡ| ಮುಟ್ಟುವುದಕೆಂದು||ಹರಿ||
ಬೆಪ್ಪ ನಾ ಕೂತು| ತೆಪ್ಪನೇರದಲೆ|
ತಿಪ್ಪೆ ಸೇರಿದೆನೊ| ಮುಪ್ಪು ತಾನೆರೆದು||ಹರಿ||
ಗುರು ಮಾತರೀಶ| ವರ ವಿಠಲ ರಾಯ|
ಕರೆದು ಭವ ತೀರ| ಸೇರಿಸುವೆನೆಂದು||ಹರಿ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ