ಏಳು
ಹರಿವ ನದಿಗಳೆಲ್ಲವು
ಶರಧಿಯ ಸೇರುವಂತೆ
ಗುರು ತೋರಿದಾ ದಾರಿಯಲಿ
ಹರಿಪದವ ಸೇರುವುದು.||ಪ||
ಮಂದಮತಿಗಳು ಕೇಳಿ
ಅಂದದಲಿ ಪೇಳುವೆನು
ಇಂದಿರಾ ಪತಿಯ ಒಲಿಸಲು
ಇಂದು ಶುಭದಿನವಂತೆ.||ಹರಿವ||
ಕಟುಕರೆಲ್ಲರು ಕೇಳಿ
ಹಟಮಾರಿಗಳು ಕೇಳಿ
ವಟು ವಾಮನನ ಸೇವೆಗಿದು
ಚುಟುಕಿನಾ ದಿನವಂತೆ.||ಹರಿವ||
ಸಾಧು ಜನರಿದ ಕೇಳಿ
ಉದಾಸೀನ ಮಾಡದೆ
ಪದುಮನಾಭನನು ಒಲಿಸಲು
ಇದುದಿನವು ಶುಭವಂತೆ.||ಹರಿವ||
ಕಡುಗೋಪಿಗಳು ಕೇಳಿ
ಬಡವಾದವರು ಕೇಳಿ
ತಡೆಬಡೆಯಿರದೆ ಹರಿನಾಮ
ಪಾಡಲತಿ ಶುಭವಂತೆ.||ಹರಿವ||
ಕಡೆಗಾಲದೊಳು ತಾನು
ಒಡನೆ ಒದಗುವೆನೆಂದು
ಒಡೆಯ ಮಾತರೀಶ ವಿಠಲ
ಬಿಡದೆ ಸಲಹುವನೆಮ್ಮ.||ಹರಿವ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ