ನಲವತ್ತೆಂಟು

 

ಪರಸತಿಯ ಬಯಸಿ ಕೆಡಬೇಡಿರೊ|

ಉರಗಶಯನನ ಆಣೆಯಿದೆ ನೋಡಿರೊ||ಪ||


ಪರಸತಿಯ ಮಾನ ತಮ್ಮಭಿಮಾನವೆಂಬರ್ಗೆ|

ಪರಗತಿಯನ್ನಿತ್ತು ಕಾಯ್ವನು ಸರಸಿಜನಾಭ||ಅಪ||


ರಾಜ ನಹುಷ ಶಚಿದೇವಿಯ|

ಗೋಜಿಗೆ ತಾ ಪೋಗಿ ಋಷಿ ಸ-|

ಹಜ ಶಾಪವ ಕೊಡಲುಗೂಡಲೆ|

ಅಜಗರ ರೂಪವಾದಂತೆ||ಪರಸತಿಯ||


ವಾನರರರಸ ವಾಲಿಯು ತ-|

ನ್ನನುಜನ ಸತಿ ರುಮೆಯ ಬಯಸಿ|

ಅನುಮಾನ ಪಡೆದುದರಿಂದ|

ತಾನವಸಾನಗೊಂಡಂತೆ||ಪರಸತಿಯ||


ಹತ್ತು ಶಿರದಸುರ ರಾವಣ|

ಸೀತೆಯ ಕಾಮಿಸಿದರಿಂದ|

ಸೋತು ಲಂಕಾಪುರ ಬಿಟ್ಟು|

ಹತನಾದ ರಾಮರ ಕರದಿ||ಪರಸತಿಯ||


ತೊರೆದು ಪರಸತಿ ಕಾಮವನು|

ಇರುವವರನು ಧಾರುಣಿಯೊಳು|

ಮರೆಯದೆ ಮನ್ನಿಸುವ ನಮ್ಮ|

ವರದ ಮಾತರೀಶ ವಿಠಲ||ಪರಸತಿಯ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು