ಅರವತ್ತೊಂದು
ರಾಮ ರಾಮರೆಂಬೆರಡಕ್ಷರದ|
ನಾಮದ ಬಲವ ಕಂಡಿರೇನು?||ಪ||
ಯಾಮಯಾಮಕೆ ನೆನೆವರ| ಬಲು|
ಕಾಮಿತಫಲಗಳನೆಲ್ಲ| ಅತಿ|
ಪ್ರೇಮದಿ ಕೊಟ್ಟು ರಕ್ಷಿಸುವಂಥ||ಅ.ಪ||
ಪರಮ ತೋಷದಿಂದ ರಾಮ ನಾಮವ|
ಮರುತಾತ್ಮಜ ತಾ ಮರೆಯದೆ ಪಾಡಲು|
ಪರಿಕಿಸಿ ವಾರಿಧಿ ಲಂಘನಗೈಯುತ|
ಕುರುಹನು ತಂದು ತರಳೆಗೆಯಿತ್ತಂಥ||ರಾಮ|
ವರ ವಿಭಿಷಣನಿಗೆ ಅಭಯವನಿತ್ತು|
ವೀರ ಸುಗ್ರೀವಗಾಲಿಂಗನ ಕೊಟ್ಟು|
ಶರಧಿಯ ಮೇಲೆ ಸೇತುವೆ ಮಾಡಿ ದಶ-|
ಶಿರದಸುರನಾ ಖಂಡಿಸಿ ಮೆರೆದಂಥ||ರಾಮ||
ಕರ್ಮದ ಫಲಂಗಳ ಸುಟ್ಟು ಹಾಕುವ|
ಮರ್ಮಂಗಳ ತಿಳಿದು ನಾಮವ ಪರ-|
ಮಾರ್ಥದಿ ಸಲೆ ಪಾಡಲು ಆತ್ಮಾನುಗ-|
ತಾರ್ಥವ ತಿಳಿದು ಮೋಕ್ಷವಕೊಡುವಂಥ||ರಾಮ||
ಸತತದಿಂದ ನಾಮ ಪಾಡಿದವರಿಗೆ|
ಉತ್ತರಮಾಗುವುದೈ ಸಂಪದಗಳು|
ಉತ್ತರಶ್ರೇಯಗಳನ್ನಿತ್ತು ಪೊರೆವ|
ಚಿತ್ತಭವಪಿತ ಮಾತರೀಶ ವಿಠಲ||ರಾಮ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ