ಮೂವತ್ತೋಂಬತ್ತು

 

ಏನೆಂದು ಬಣ್ಣಿಸಲಿ ಪಂಚದಳನೇತ್ರನ||ಪ||

ಬೆನ್ನ ಬಿಡದೆಲೆ ಸಲಹುವ ಪನ್ನಗಶಯನನಾ||ಅ.ಪ||


ಪಕ್ಷಿಯ ಬೆನ್ನ ಏರಿದನ|

ಕುಕ್ಷಿಯೊಳಜನ ತೋರಿದನ|

ಸಾಕ್ಷತ್ಕರಿಸಿ ಉಡುಪಿಯಲಿ|

ಮೋಕ್ಷಗೊಡುವೆ ಎಂದವನಾ||ಏನೆಂದು||


ಆನೆ ರೂಪನ ಸಲಹಿದನ|

ಚಿನ್ನ ಬಾಲನ ಪೊರೆದವನ|

ಹೆಣ್ಣ ಕದ್ದಿಹ ರಕ್ಕಸನ|

ಮಣ್ಣು ಮಾಡಿ ಮೆರೆದವನಾ||ಏನೆಂದು||


ಕಾಲಿಯ ತಲೆಯ ಮೆಟ್ಟಿದನ|

ಬಾಲೆರ ಸೆರೆಯ ಬಿಡಿಸಿದನ|

ಲಲನೆ ಕೂಗ ತಾ ಕೇಳಿ|

ಬಲು ಅವಸರದಿ ಬಂದವನ||ಏನೆಂದು||


ಉತ್ತಮ ವಾಜಿಯೇರಿದನ|

ಹತ್ತವತಾರವೆತ್ತಿದನ|

ಸೋತವರ ಕಂಡು ಕಾಯ್ವ|

ಮಾತರೀಶ ಹರಿ ವಿಠಲನ||ಏನೆಂದು||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು