ನಲವತ್ತು

 

ನಾ ಕರೆದಾಗ ಬರಲಿಲ್ಲವೇಕೆ ಕಾಯಜಪಿತ ನೀನು ||ಪ||

ನಾ ಕರೆದಾಗಲು ನೀ  ಬಾರದೆಯಿದ್ದರೆ

ಈ ಕರುಣಾಕರನೆಂಬ ಬಿರುದು ನಿನಗೇಕೊ ರಂಗ ||ಅ.ಪ||

 

ಭಾರಿ ಮಡುವಿನಲಿ ಘೋರ ಮಕರ ತಾ

ಕರಿದಂತಿ ಕಾಲ ಪರಿಯೊಳೆಳೆಯುತಿರೆ

ನರಳಾಡುತಿರಲು ಮೊರೆಯನ್ನು ಕೇಳಿ

ತ್ವರಿತದಿಂದಲಿ ಪೊರೆಯಲು ಬಂದವ ||ನಾ ಕರೆದಾಗ||


ಹಿರಣ್ಯಕನ ಸುತ ತರಳ ಪ್ರಹ್ಲಾದ

ಹರಿಹರಿ ಎನುತಿರೆ ಪರಿತಪಿಸಿ ಪಿತನು

ಸೆರೆಮನೆಯೊಳಿಕ್ಕೆ ತರಿದು ರಕ್ಕಸನ

ಸ್ಥಿರಪದವಿತ್ತು ಪೊರೆದ ನರಹರಿಯೆ||ನಾ ಕರೆದಾಗ||


ಕರವನು ಮುಗಿದೆನು ಮರೆಯದೆ ನಿನ್ನಡಿ-

ಗೆರಗುತನುದಿನವು ದುರಿತ ಸಾವಿರದ

ಸೈರಿಸಲಾಗದ ಉರಿಯನಾರಿಸೈ 

ಹರಿ ಮಾತರೀಶ ವರವಿಠಲರಾಯ||ನಾ ಕರೆದಾಗ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು