ಹದಿಮೂರು

 

ಅರಸಬನ್ನಿರೆ ನೀರಜಾಕ್ಷಿಯರೆಲ್ಲ|

ಅರವಿಂದಲೋಚನನ ಕರೆಯಬನ್ನಿರೆ||ಪ||


ತೊಟ್ಟಿಲೊಳಾಡುತ ಇದ್ದಾತ|

ಮೆಟ್ಟಿಲೊಳಿಳಿದು ಪೋದನೇ|

ಕಟ್ಟಿಗೆ ರಾಶಿ ಹಿಂದಡಗಿ|

ಅಟ್ಟದಾ ಮೇಲೋಡಿದನ||ಅರಸಬನ್ನಿರೆ||


ತುತ್ತ ಕೊಡುತಿರಲಾ ಚೋರ|

ಮತ್ತೆಲ್ಲಿ ಓಡಿ ಪೋದನೆ|

ಹುತ್ತ ಹಾವಿನ ಮೇಲೇರಿ|

ತತ್ತತ್ತೆಂದು ನಲಿಯುವವನ||ಅರಸಬನ್ನಿರೆ||


ಹಾಲು ಮೊಸರಿನ ಬಳ್ಳಗಳ|

ಕಲ್ಲು ಕೋಲಿನಿಂದ ಕೆಡವಿ|

ಮೆಲ್ಲ ಬೆಣ್ಣೆಯ ಮೆಲುತಿರುವ|

ಗೊಲ್ಲ ಗೋಪಾಲಕೃಷ್ಣನ||ಅರಸಬನ್ನಿರೆ||


ಸೊಕ್ಕಿದ ರಕ್ಕಸರ ನೆಗಹಿ|

ರಕ್ಕಸಿಯ ಮೊಲೆ ಕುಡಿದವನ|

ಶಕಟಾದಿ ಅಸುರರ ಕುಟ್ಟಿ|

ನಕ್ಕು ನಗುತಿರುವ ಬಾಲನ||ಅರಸಬನ್ನಿರೆ||


ಅತುಳಬಲದಿ ಗಿರಿಯನೆತ್ತಿ|

ಸತತ ಧಾರೆಯ ನಿಲಿಸಿದನ|

ಹತ್ತವತಾರ ತಳೆದ ಸಿರಿ|

ಮಾತರೀಶ ವಿಠ್ಠಲನ್ನ||ಅರಸಬನ್ನಿರೆ||







ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು