ಐವತ್ತನಾಲ್ಕು
ಸ್ತುತಿಸಿರೋ ಮುನಿ ವಾದಿರಾಜನ
ಭೂತರಾಜ ಸೇವಿತ ಪುಂಗವನ||ಪ||
ಮಾತೆ ಮಕ್ಕಳ ಪೊರೆವಂತೆ|
ಭಕ್ತರನು ಪೊರೆಯುತಿರುವನ||ಅ.ಪ||
ಗದ್ದೆ ಗೌರಿಯೊಳು ಪುಟ್ಟಿ ತಾನು|
ಸೋದೆಮಠ ಪರಂಪರೆಯ ಗಳಿಸಿ|
ಮಧ್ವಮತವನು ಜಗಕೆ ಸಾರುತ|
ಮುದ್ದು ಗೋವಿಂದನ ನೆನೆದವನ||ಸ್ತುತಿಪೆ||
ಕಡಲೆ ಬೇಯಿಸಿ ಬೆಲ್ಲದೊಳದ್ದಿ|
ಮಡ್ಡಿ ಪ್ರಸಾದವನು ಮುನ್ನದಿ|
ಮಾಡಿಸಿ ಒಡೆಯ ಹಯವದನಂಗೆ|
ಸಡಗರದಿ ಕೊಡುವ ಯತಿರಾಯನ||ಸ್ತುತಿಪೆ||
ವಿಷಯ ರಹಿತ ಭಕ್ತಜನಕೆಲ್ಲ
ವಸುಮತಿಯೊಳಿಷ್ಟಾರ್ಥ ಕೊಡುವ
ಕುಸುಮಪಾದ ಭಾವಿರುದ್ರನಿವ
ಅಸಮ ಬಲ ಮಾತರೀಶವಿಠಲ||ಸ್ತುತಿಪೆ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ