ಐವತ್ತೇಳು

 

ಬೇಡಿಕೊಳ್ಳಲು ನೀನೇನ ಕೊಡಬಲ್ಲೆ|

ಮಾಡಿದ ಪಾಪಗಳಗಣಿತವಾಗಿರಲು||ಪ||

ಹಿಡಿದ ಕಿಚ್ಚು ಸುಡದಲೆ ಬಿಡುವುದೇನಣ್ಣ|

ಬಿಡದೆ ಬಾಯಿಯನು ಬಡಿದುಕೊಳ್ಳುತಿರಲು||ಅ.ಪ||


ನೋಡದೆ ತಂದೆತಾಯಿಗಳ |ಕೂಡಿಟ್ಟೆ ಧನ ಕನಕ ಹೊಣೆ-|

ಗೇಡಿತನದಿ ಕಡು ಕೃಪಣನೆನಿಸಿ|

ಬಡತನವು ಬರಸೆಳೆದು| ಹಿಡಿದಪ್ಪಿಕೊಂಬಾಗ ಸಲೆ|

ಕಡಲೊಡೆಯ ನಿನ್ನ ಕರೆದು ಪರಿಯೊಳಗೆ ||ಬೇಡಿ||


ಸಜ್ಜನರ ಸಂಗ ಮಾಡದೆ | ದುರ್ಜನರ ಕೂಟ ಸೇರಿ |

ಮೋಜಿನ ಜೀವನವ ನಾನು ಕಳೆದು |

ಜೂಜೆಂಬ ಕೂಪದಿ ಬಿದ್ದು| ನಿಜ ಬಣ್ಣವದು ತಿಳಿದಾಗ||

ಮೂಜಗದೊಡೆಯನಡಿಗೆ ಕೈಮುಗಿದು||ಬೇಡಿ||


ಅತಿ ವಿಷಯ ಭೋಗಂಗಳಲ್ಲಿ|ಮತಿಗೇಡಿತನವದೋರಿ |

ಸತಿಸುತರ ಅಭಿಲಾಷೆ ಮಾಡುತಲಿ|

ಗತಿಹೀನನಾಗಿ ಬೀಳಲು| ನಿತ್ಯ ನೀ ಗತಿಯೆಂದು ಸಿರಿ|

ಮಾತರೀಶ ವಿಠಲನ ಪದತಲದಿ||ಬೇಡಿ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅರುವತ್ತಾರು

ಅರವತ್ತೇಳು

ಎಪ್ಪತ್ತೊಂದು