ನಲವತ್ತಾರು

 

ಆಡುತ ಬಂದಾನೋ|ಓಡುತ ಬಂದಾನೋ|

ನಮ್ಮೊಡೆಯ ಉಡುಪಿಯ ಶ್ರೀಕೃಷ್ಣ||ಪ||


ಹಡಗಿಂದ ದಡವಿಡಿದು|

ಪಡುಗಡಲ ತಡಿಯಿಂದ|

ಕಡಲೊಡೆಯ ನಡೆತಂದ|

ಕಡೆಗೋಲ ಪಿಡಿಯುತಾ|

ಪೊಡವಿಯ ಒಡೆಯ ಹರಿ||ಆಡುತ||


ಸೋತು ಹೋಗಲು ಎನ್ನ|

ಎತ್ತಿ ಪಿಡಿದವ ಘನ್ನ|

ಸ್ಥಿತಿ ಲಯದ ಕತೃ ಶ್ರೀ|

ಮಾತರೀಶ ವಿಠಲನು|

ಮಾತನುಳಿಸುವೆಯೆಂದು||ಆಡುತ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು