ಐವತ್ತಾರು
ಕಂಡೆನ್ನ ಬಾರೋ ಗಜಮುಖನೆ|
ಉಂಡೆಯೊಡೆ ಚಕ್ಕುಲಿ ನಿನಗೀವೆ||ಪ||
ಹಿಂಡು ವಿಘ್ನಗಳ ಖಂಡಿಸಿ ನೀ|
ಯಂಕುಶವಿಡಯ್ಯ ಏಕದಂತ||ಅ.ಪ||
ಕನಕ ಮಣಿ ಮುಕುಟ ಧರ | ಸಾನುರಾಗದಿ ಬಂದು |
ಮುನ್ನಪೂಜೆಯನು ಗೊಂ | ಡೆನ್ನ ಮಾನಸಕೈದು |
ಹೊನ್ನಿನುಡುಗೆ ಧರಿಸುತ | ಲೆನ್ನ ನೀನು ಪೊರೆದೆಯೊ |
ಘನ್ನ ಮಹಿಮ ಗುಣ ಸಂ | ಪನ್ನನಾಗಿ ಮೆರೆಯುತ ||ಕಂಡೆನ್ನ||
ತಡಬಡಿಸಿ ಉಂಡು ನಿ | ನ್ನುದರವು ಬಿರಿಯುತಿರಲು |
ಹಿಡಿದು ಪಣಿಯನುದರಕೆ | ಜಡಿದೆಳೆದುಕಟ್ಟುವುದ |
ನೋಡಿ ಗಹಗಹಿಸಿದಾ | ಉಡುಪನಿಗೆ ನೀ ಕೋರೆ |
ದಾಡೆಯನೆಳೆದವನ ಮು| ಸುಡಿಯ ಬಲು ಘಾತಿಸಿದೆ ||ಕಂಡೆನ್ನ||
ಪ್ರಥಮದೊಳು ಪೂಜಿಪರ | ಅತಿವಿಘ್ನಗಳುಯೆಲ್ಲ |
ಸೋತುಪೋಗುವುದು ಭವ | ತತಿಗಳನು ಮೇಲಣದಿ |
ಮುತ್ತಿಕೊಂಡಿಹ ಪಾಪ | ಗತಿಯಗೂಡುವುದೆಂಬ |
ಮಾತರೀಶ ವಿಠಲನ | ಹಿತನುಡಿಗಳಿದ ಕೇಳಿ ||ಕಂಡೆನ್ನ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ