ನಲವತ್ತೊಂಬತ್ತು

 

ಹರಿನಾಮವೆಂಬ ಪರಮ ವರದಾನ|

ಗುರುಕರುಣೆಯಿಂದೆಮಗೆ ದೊರಕಿತಯ್ಯ ||ಪ||


ಗುರುವಿನಂಘ್ರಿ ನಂಬಿದರ್ಗೆ |

ಪರಮಪದದವು ಸಿಗಲುಂಟು||ಅ.ಪ|| 


ಹರಿಯೆನಗೆ ನಯನವಿತ್ತ|

ಹರಿಯ ತೋರ್ವ ದೃಷ್ಠಿ ಗುರುವಿತ್ತ|

ಶಿರವೆನಗೆ ತಾ ಹರಿಯಿತ್ತ|

ಪರಿಪರಿ ಬುದ್ದಿಯನು ಗುರುವಿತ್ತ||ಹರಿನಾಮ||


ಕರಯುಗಳ ಹರಿಯೆನಗಿತ್ತ|

ಕರಮುಗಿವ ಬುದ್ದಿಯ ಗುರುವಿತ್ತ|

ಚರಣದ್ವಯವು ಹರಿಯಿಂದ|

ಚರಣಭಜಿಪ ಯೋಗ ಗುರುವಿಂದ||ಹರಿನಾಮ||


ಈ ದೇಹವದು ಹರಿಯಿಂದ|

ಸಾಧನವಾಯಿತದು ಗುರುವಿಂದ|

ವಿಧಿಲಿಖಿತ ಹರಿಯೆನಗಿತ್ತ|

ಬದುಕು ಹಸನಾಯಿತು ಗುರುವಿಂದ||ಹರಿನಾಮ||


ಸತತ ಗುರುಸೇವೆ ಮಾಳ್ಪರ|

ಉತ್ತಮಿಕೆಯಿಂದಲಿ ಕಾಯ್ವ ಹರಿ|

ಪರಮಪುರುಷ ಪರಮಾತ್ಮ|

ಮಾತರೀಶ ವಿಠಲ ಗೋವಿಂದ||ಹರಿನಾಮ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು