ಮೂವತ್ತನಾಲ್ಕು

ಕಾಸು ಕಾಸಿಗೆ ಸಿಗಲಾರ ನಮ್ಮ ವಾಸುದೇವ ವಿಠಲ ||ಪ||

ದಾಸ ದಾಸರ ಮನದೊಳು ಸದಾ ವಾಸಿಪನಲ್ಲದೆ|| ಅನು.ಪ||

ಕಾಮದಾಸೆಗೆ ಗಾರುಡಿಗ ಸಿಗ ಯಾಮಯಾಮಕು|

ಪ್ರೇಮದಿ ಭಜಿಪರ ಹರಿ ನಿತ್ಯದಿ ಕಾಮಿಪನಲ್ಲದೆ||ಕಾಸು||

ಕ್ರೋಧಗೊಂಡರ ಬಗೆಗೆ ಸಿಗನೊ ವ- ಸುದೆಯೊಳಂಗೆಲ್ಲ|

ಮೋದದಿಂ ಪೂಜಿಪರ ಭಕುತಿಗೆ ಸಿದ್ದಿಪನಲ್ಲದೆ||ಕಾಸು||

ಲೋಭಗೊಂಡವರ ಮನೆಯೊಳಗೆ ದು-ರ್ಲಭನಾಗಿಹನೈ|

ಸಭ್ಯತನದ ದಾನಿಗಳಿಗೆಲ್ಲ ಅಭಯಿಪನಲ್ಲದೆ||ಕಾಸು||

ಸತತದಿ ಮಾತರೀಶ ವಿಠಲನ ಸ್ತುತಿಪರಿಗೆಲ್ಲ|

ಅತಿಹಿತದಿ ತಾ ಪೊರೆಯುವೆನೆಂದು ನುತಿಸುವನಲ್ಲದೆ ||ಕಾಸು||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು