ಅರುವತ್ತೆರಡು

 

ಕಾಲನ ದೂತರು|ಕಾಲನ್ನೆಳೆವಾಗ

ಗೋಳನ್ನಿಟ್ಟರೆ ಫಲವೇನು?

ಹೆಳವನ ಕೂಡಿ| ಮೇಳದಿ ಕುಣಿಯಲು

ಮೂಳಿಗಾಗುವ ಒಳಿತೇನು?


ಪಾಲಿಗೆ ಬಂದ|ಕೆಲಸವ ಮಾಡದೆ

ಮೂಲೆಯ ಸೇರಿದ ಬಲುವೇನು?

ಬಾಲಮುಕುಂದನ|ಲೀಲವಿನೋದವ

ಕೇಳದೆಯಿರುವ ಛಲವೇನು?


ಪರಮಭಕ್ತಿಯಲಿ|ಅರಿತು ಭಜಿಸುವರ

ಮೆರೆಸುವನಾರು ಗೊತ್ತೇನು?

ಸಿರಿ ಮಾತರೀಶ|ವರ ವಿಠಲರಾಯ

ಕರುಣದಿ ಪೊರೆವ ಕಾಮಧೇನು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅರುವತ್ತಾರು

ಅರವತ್ತೇಳು

ಎಪ್ಪತ್ತೊಂದು