ಇಪ್ಪತ್ತ ಮೂರು

 ಬಲ್ಲವರು ಪೇಳಿ ಹನುಮನ ನೋಡಿದಿರಾ||ಪ||

ಮಲ್ಲರ ಗರಡಿಯ ಭಿತ್ತಿ ಪಟದೊಳಗೆ ಹನುಮನ ನೋಡಿದಿರಾ||ಅ.ಪ||


ಶೂಲಪಾಣಿಯ ರೂಪ|

ಭಾಳನೇತ್ರನ ತಾಪ|

ಕಳೆಯುತ ಜಗದ ಪಾಪ|

ಮಿಳಿಸುತ ಬಲು ಪ್ರತಾಪ|

ಸೋಲರಿಯದ ಬಲು ಬಲವಂತ ಹನುಮನ ನೋಡಿದಿರಾ||೧||


ಅಂಜನ ಕಂದ ಬಂದ|

ಸಂಜೀವನವ ತಂದ|

ಅಂಜದೆ ಬೆಂಕಿಯನಿಟ್ಟ|

ರಂಜಿಸಿ ಲಂಕೆಯ ಸುಟ್ಟ|

ಭುಂಜಿಸಿ ಫಲವ ಹಾರಿದ ದಿಟ್ಟ ಹನುಮನ ನೋಡಿದಿರಾ||೨||


ವ್ಯೋಮ ಮಾರ್ಗದಿ ಚಲಿಸಿ|

ಕಾಮ ಕ್ರೋಧವ ತ್ಯಜಿಸಿ|

ರಾಮ ಸೀತೆಯ ಒಲಿಸಿ|

ಅಮರ ಪದವಿಯ ಗಳಿಸಿ|

ಪಾಮರ ಮತಿಗಳ  ಪ್ರೇಮದಿ ಪೊರೆವ ಹನುಮನ ನೋಡಿದಿರಾ||೩||


ಮಾತರೀಶವಿಠಲನ ದಯದಿ|

ಮಾತಪಿತರ ಸೇವಿಸುವರ|

ಸೀತಾರಾಮರ ಭಜಿಸುತ|

ಅತಿ ಮೋದದಿಂದಲಿ ನಿಂದು|

ಸೋತವರನೆತ್ತಿ ಸತತದಿ ಸಲಹುವ ಹನುಮನ ನೋಡಿದಿರಾ||೪||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು