ನಾಲ್ಕು
ನಖಶಿಖಾಂತ ನೀನೆ ತುಂಬಿರಲು
ಸುಖವಾಗಿ ಇರುವೆನಯ್ಯ ಖಗವಾಹನ||ಪ||
ಶಿರದೊಳಗೆ ಧ್ಯಾನವು
ಎರಡು ನೇತ್ರದೊಳಗೆ
ಮೂರುತಿ ನಿನ್ನ ಹುದುಗಿ
ಕೀರುತಿಯ ಬಾಯಿ ಪಾಡುತಿರಲಿ||ನಖಶಿಖಾಂತ||
ಕಿವಿಗಳೆರಡಲಿ ಸದಾ
ಸವಿ ನಾಮವದು ನಿನ್ನ
ಅವಿರತವಾಗಿ ನೆಲೆಸಿ
ಸುವಿಚಾರ ಎನ್ನ ಮನದೊಳಿರಲಿ.||ನಖಶಿಖಾಂತ||
ನಾಲಗೆಯೊಳು ಭಜನೆಯು
ಕಾಲನಡಿಗೆ ಯಾತ್ರೆಯು
ತಲೆಯೊಳ್ ಮಂತ್ರಪಠಣ
ಕಲ್ಲು ಹೃದಯವನು ಕರಗಿಸಲಿ.||ನಖಶಿಖಾಂತ||
ನಿನ್ನ ಸಂಶಯಿಸುವರ
ಬೆನ್ನ ಬಿಡದೆ ಕಾಡುವೆ
ಘನ್ನ ಮಹಿಮನ ಕರುಣೆ
ಎನ್ನೊಳಧಿಕವಾಗಿರಲಿ ಹರಿಯೆ.||ನಖಶಿಖಾಂತ||
ಕರಮುಗಿದು ಬೇಡುವೆನು
ಹರಿಚರಣಕೆರಗುತಲಿ
ಬಾರಿ ಬಾರಿಗೆ ನೆನೆವೆ
ಸಿರಿ ಮಾತರೀಶ ಪೊರೆಯುತಿರಲಿ.||ನಖಶಿಖಾಂತ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ