ನಲವತ್ತೊಂದು
ಕದ್ದು ಹೋಯಿತು ಮನವು|
ಮುದ್ದು ರಂಗನ ಮನೆಗೆ||ಪ||
ಸದ್ದ ಮಾಡದೆ ಮೆಲ್ಲ-|
ನೆದ್ದು ತಾನೋಡಿ ಪೋಗಿ||ಅ.ಪ||
ಬಿದ್ದದ್ದು ಬಳಲಿದ್ದು ಎದ್ದೇಳಲಾಗದ್ದು|
ಸುದ್ದಿಯೊಳಗಿಲ್ಲದ್ದು ಇದ್ದಕ್ಕಿದ್ದ ಹಾಗೆ ||ಕದ್ದು||
ಗದ್ಯಪದ್ಯವ ಕಲಿತು ವಿದ್ಯೆಯೆಲ್ಲವನರಿತು|
ಸದ್ಯ ಸಾವಕಾಶದಿ ಬುದ್ದಿಯಿಲ್ಲದೆ ಮರೆತು||ಕದ್ದು||
ಹದ್ದ ತಾನೇರಿದವ ಸಿದ್ದಪುರುಷನು ನಮ್ಮ|
ಮುದ್ದು ಮಾತರೀಶನ ಸಿದ್ದಿಯಪಡೆಯಲೆಂದು||ಕದ್ದು||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ