ಮೂವತ್ತು
ಮುದ್ದು ಗುರುಗಳ ನೆನೆಯಿರೋ ಜಗದಿ|
ಮುದ್ದು ಗುರುಗಳ ನೆನೆಯಿರೋ||ಪ||
ಬದ್ದಕಾಯರೆ ಕೇಳಿ|
ಮಧ್ವಮತವನು ಸಾರಿ|
ಸಿದ್ಧರೂಪದೊಳಿರುವ||ಮುದ್ದು||
ಮಧ್ವಮತದ ಕದ ತೆರೆದು|
ಆದಿಗುರು ಪದವ ಪಡೆದ|
ಮಧ್ವಪತಿ ರಾಯರೆಂಬೊ||ಮುದ್ದು||
ಸೋದೆಯೊಳು ನೆಲೆಯನಿಂತು|
ಮೋದದಿಂ ಕರುಣೆ ತೋರ್ವ|
ವಾದಿರಾಜ ಯತಿಯೆಂಬ||ಮುದ್ದು||
ಮಂಚಾಲೆ ಪುರದಿ ನಿಂದು|
ಸಂಚಿತದ ಕರ್ಮ ಕಳೆದ|
ಸಂತ ರಘುರಾಯರೆಂಬ||ಮುದ್ದು||
ಪರಮಗುರು ಪರಮಾತ್ಮ|
ಸಿರಿ ಮಾತರೀಶ ವಿಠಲನ್ನ|
ಪರಿಪರಿಯಿಂದ ನೆನೆಯುವ||ಮುದ್ದು||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ