ಎಪ್ಪತ್ತೆರಡು

 

ಯಾಕೆ ನೀನೆಳೆತಂದೆ ಈ ದೇಶದೊಳಗೆ|

ಸಾಕೆನಗೆನ್ನ ಜೀಯ||ಪ||

ನಾಕು ದಿನದ ಬಾಳ್ವೆ ವಿಧವಿಧ ವೇಷವದ|

ನೇಕ ಕಟ್ಟುವುದಕ್ಕೆ||ಅ.ಪ||


ಸಾಕು ಸಾಕಯ್ಯ|ಬೇಕೆಂಬ ಬಯಕೆ| ಮನದ|

ಮೂಕ ವೇದನೆಯ|ದೇಕೆ ಕೇಳಿಸದು|

ಅಕಳಂಕ ದೇವ|ಬಕುಳಾ ದೇವಿಯ|ತನಯ|

ಯಾಕೆ  ನೀ ಹೀಗೆ|ಮೂಕನಾದೆಯೋ||೧||


ಕಾಯವ ಸವೆಸಿ ಬಲು|ಭಯವಗೊಂಡೆನೀ|ಜಗದಿ|

ಮಾಯವಿದೆಂತೋ|ದಯವದೋರಯ್ಯ|

ಹಯವದನ ದೇವ|ಸಾಯುಜ್ಯ ಪದವ|ಕೊಟ್ಟು|

ಭಯ ಭವದ ಕಳೆಯೊ|ಕಾಯಜ ಪಿತನೇ||೨||


ಮಾತರೀ ಪುರದ| ಪಿತ ವಿಠಲರಾಯ|ಎನ್ನ|

ಮಾತ ಮನ್ನಿಸುತ|ಹಿತವ ಕಾಯುವುದು|

ಕತ್ತಲೆಯ ಕಳೆದು|ಮತ್ತೆ ಬೆಳಗುವುದು|ಮನಕೆ|

ಮತಿಯಿತ್ತು ತಿಳುಹ|ಬಿತ್ತಬೇಕಯ್ಯ||೩||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅರುವತ್ತಾರು

ಅರವತ್ತೇಳು

ಎಪ್ಪತ್ತೊಂದು