ಹತ್ತೊಂಬತ್ತು
ಮರುಳಾದೆ ನಾನು ಮರುಳಾದೆ ಸರಸಿಜನಾಭ|
ಎರವಿನ ಸಂಸಾರ ಸರಳ ಎಂದು ತಿಳಿದು ||ಪ||
ಇರುಳಿಗೆ ಕಂಡ ಬಾವಿಗೆ ನಾನು ಉರುಳಿ ಬಿದ್ದೆ|
ಕರುಳುದೊಗಲ ಜೀವ ಗೂಡಿದು ಮಾಂಸದ| ಮುದ್ದೆ ||ಅ.ಪ||
ಹೊಲಸು ಬಾಗಿಲೊಳು ಬಂದೆ,|
ಕಲಸಿ ಮಲಮೂತ್ರ ತಿಂದೆ|
ಮೊಲೆಗುಡಿದು ನಾನು ಸೊಕ್ಕಿ,|
ಪಾಪದ ಕೂಳ ಸರಿ ಮುಕ್ಕಿ||ಮರುಳಾದೆ||
ಮಂಗಳವಾಗಿಹುದೆನ್ನುತ|
ಹಂಗಿನನ್ನ ಸರಿಯುಂಡು|
ತಂಗಳು ಜೀವ ಮಾಡಿಟ್ಟು|
ಕೊಂಗತನದಲಿ ಸುರೆಗೊಂಡು||ಮರುಳಾದೆ||
ಮೋಹದ ಹೊದಿಕೆಯನು ಹೊದ್ದು|
ವಿಹರಿಸಿ ಸಂಸಾರ ವನದೊಳು|
ಬಹುವಿಧದಿ ಜೀವನ ನಡೆಸಿ|
ಕಹಿಯೇರಿ ಮೋಹಪಾಷವು||ಮರುಳಾದೆ||
ಪೊರೆಗಳಚಿ ದಾಟಿಸೀ ಭವ|
ಶರಧಿಯ ನೀರೊಳು ತೇಲಿಸಿ|
ಕರೆಯನು ಮುಟ್ಟಿಸಿ ಪಾಲಿಪ|
ಗುರು ಮಾತರೀಶನ ಕಂಡು||ಮರುಳಾದೆ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ